ಉಳ್ಳಾಲ ಡೆಸ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಕಾಂಗ್ರೆಸ್‍ನ 24ನೇ ಅಧಿವೇಶನದ ಉದ್ಘಾಟನೆ ಗುರುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಹಾಗೂ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಪ್ರೊ.ಉಪಿಂದರ್ ಸಿಂಗ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇಂದು ಮಧ್ಯಯುಗದ ಅಗಾಧವಾದ ಬೌದ್ಧಿಕ ಉತ್ಸಾಹ ಮತ್ತು ಸೃಜನಶೀಲ ಉತ್ಪಾದನೆಗಳನ್ನು ವಾಸ್ತವವಾಗಿ ಚರ್ಚೆಯಿಂದ ದೂರ ಉಳಿಸಲಾಗುತ್ತಿದೆ. ಆದ್ದರಿಂದ ಬೌಧಿಕ ಇತಿಹಾಸವನ್ನು ಉತ್ಪ್ರೇಕ್ಷೆ ಮಾಡದೆ ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಚಿಂತನೆ, ಅಧ್ಯಯನಗಳು ನಡೆಯಬೇಕು ಎಂದು ಅವರು ಹೇಳಿದರು. ಭಾರತದ ಇತಿಹಾಸವು ಅಭೂತಪೂರ್ವವಾದುದು. ಭಾರತದ ವಿವಿಧ ಭಾಗಗಳಲ್ಲಿರುವ ಶಿಲಾಶಾಸನವನ್ನು ಶೋಧಿಸಿ ಅಧ್ಯಯನ ಮಾಡಲು ನೈಪುಣ್ಯತೆ ಇರುವ ಯುವ ಇತಿಹಾಸತಜ್ಞರ ಅನಿವಾರ್ಯತೆ ಇದೆ . ತತ್ವಶಾಸ್ತ್ರದ ಮಾಹಿತಿಗಳು, ಧಾರ್ಮಿಕ ವಿಚಾರಗಳು, ರಾಜಕೀಯ ಚಿಂತನೆ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸ ಅಥವಾ ಯಾವುದೇ…
Author: Ullal News
ಉಳ್ಳಾಲ: ರಾ.ಹೆ.66ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಗುರುವಾರ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ 3 ಗಂಟೆಗಳ ಕಾಲ ವಾಹನಗಳು ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟುವಿನವರೆಗೆ ಸರತಿ ಸಾಲಿನಲ್ಲಿ ನಿಂತಿತ್ತು. ಉಳ್ಳಾಲ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೊಣಾಜೆ : ಕೋಟಿಪದವು ಶ್ರೀರಾಮ ಭಜನಾ ಮಂದಿರದ ಪುನರ್ಪ್ರತಿಷ್ಠೆ ಪ್ರಯುಕ್ತ ದೀಪ ಪೂಜನಾ ಕಾರ್ಯಕ್ರಮ ಗುರುವಾರ ನಡೆಯಿತು.
ತೊಕ್ಕೊಟ್ಟು: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೃತ್ಯದ ಬಗ್ಗೆ ಮಾತನಾಡದೇ ಇರುವುದು ಅವರ ಕಾಯವೈಖರಿಯನ್ನು ತೋರಿಸುತ್ತದೆ ಎಂದು ಎಸ್ ಎಸ್ ಎಫ್ ರಾಜ್ಯ ಸದಸ್ಯ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ. ಅವರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ವತಿಯಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ, ಕೋಮು ದ್ವೇಷದ ವಿಷ ಬೀಜ ಬಿತ್ತುವುದನ್ನು ಖಂಡಿಸಿ, ಮುಗ್ಧ ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ, ಅಲ್ಪಸಂಖ್ಯಾತರ ಆರಾಧನಾಲಯಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಯಾಕೂಬ್ ಸಅದಿ ನಾವೂರು, ಎಸ್ ಎಸ್ ಎಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಸಅದಿ ಕಿನ್ಯಾ, ಎಸ್ ಎಸ್ ಎಫ್ ಜಿಲ್ಲಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮನೆ,…
ತಲಪಾಡಿ: ತಲಪಾಡಿ ದೇವಿಪುರದ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ನಡೆಯಿತು.
ಉಳ್ಳಾಲ: ಶಿಕ್ಷಕ ವೃತ್ತಿಯು ಪವಿತ್ರವಾದುದು, ಶ್ರೇಷ್ಠವಾದುದು. ಶಿಕ್ಷಕ ವೃತ್ತಿಗೆ ಸಮಾನವಾದ ವೃತ್ತಿಯು ಬೇರೊಂದಿಲ್ಲ. ಶಿಕ್ಷಕರು ತನ್ನ ಬಳಿಬರುವ ಎಲ್ಲ ಮಕ್ಕಳನ್ನು ಸಮಾನವಾಗಿ ನೋಡಬೇಕು. ತನ್ನ ಸೇವೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಎಸ್. ಹಂಝರವರು ಹೇಳಿದರು. ಹಳೆಕೋಟೆ ಸಯ್ಯಿದ್ ಮದನಿ ವಿದ್ಯಾ ಸಂಸ್ಥೆಗಳ ಶಿಕ್ಷಕ ವೃಂದದ ಆಶ್ರಯದಲ್ಲಿ ಮಂಗಳೂರು ಟೀಚರ್ಸ್ ಕೋ-ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಕೆ. ಮಂಜನಾಡಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ಎಂ. ಹೆಚ್. ಮಲಾರ್, ಪಿ.ಹೆಚ್. ಹಮೀದ್, ಹಿಲ್ಡಾ ಕ್ಲಮಂಸಿಯಾ ಪಿಂಟೋ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಪ್ರಾಮಾಣಿಕ ಶಿಕ್ಷಕರಿಗೆ ಗೌರವವು ತಾನಾಗಿಯೇ ಬರುತ್ತದೆ ಎಂದು ಹೇಳಿದರು. ಶಿಕ್ಷಕರು ಉರಿಯುತ್ತಿರುವ ದೀಪವಾಗಿದ್ದು ಸತತ ಅಭ್ಯಾಸವೆಂಬ ಎಣ್ಣೆಯಿಂದ ಅದು ಪ್ರಜ್ವಲಿಸಬೇಕು. ಸದಾ ಶೈಕ್ಷಣಿಕ ರಂಗದಲ್ಲಿ ಸಕ್ರಿಯರಾಗಿರುವ ಶಿಕ್ಷಕರಿಗೆ ಸಂದ ಗೌರವ ಅದಾಗಿರುತ್ತದೆ ಎಂದು ಮಂಗಳೂರು ತಾಲೂಕು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ಅವರು ಹೇಳಿದರು. ಕಾರ್ಯಕ್ರಮದಲ್ಲಿ…
ಉಳ್ಳಾಲ: ಯಾರು ತನ್ನನ್ನು ತಾನು ಅರಿತನೋ ಅವನು ಸೃಷ್ಟಿಕರ್ತನನ್ನು ಅರಿತನು. ವಿದ್ಯಾರ್ಥಿಗಳು ಇಂದು ತಮ್ಮನ್ನು ಅರಿಯಬೇಕಾದ ಅಗತ್ಯವಿದೆ. ಅಂತಹ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತಿದೆ’ ಎಂದು ಹಿರಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ರಹಮತುಲ್ಲಾ ಅಭಿಪ್ರಾಯಪಟ್ಟರು. ಅವರು ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ವಾರ್ಷಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಎಂ. ಶರೀಫ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪಿ.ಟಿ.ಎ. ಅಧ್ಯಕ್ಷರಾದ ಯು.ಕೆ.ಖಾಲಿದ್‍ರವರು ಸಂದರ್ಬೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಇತರ ಪಿ.ಟಿ.ಎ. ಸದಸ್ಯರು, ಹಿರಾ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಫಾತಿಮಾ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಭಾರತಿ ಎಮ್. ಆರ್ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ನಾಯಕಿ ಸಫ ಮೆಹರೂನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಮೀರ ಕಾರ್ಯಕ್ರಮ ನಿರೂಪಿಸಿದರು, ಸೌಧ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಉಳ್ಳಾಲ: ತಲಪಾಡಿ ಗ್ರಾಮದ ಪಿಲಿಕೂರುವಿನ ಒಳರಸ್ತೆಗೆ ಜಿಲ್ಲಾ ಪಂಚಾಯತ್‍ನ 6 ಲಕ್ಷ ಅನುದಾನದಡಿ ಕಾಂಕ್ರಟೀಕರಣ ರಸ್ತೆ ನಿರ್ಮಾಣಗೊಂಡಿದ್ದು, ನೂತನ ರಸ್ತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು. ತಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಆಳ್ವ, ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತಾ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಕ್ಷೇತ್ರ ಕಾರ್ರ್ಯದರ್ಶಿ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಸುಭಾಷ್ ಮಾಧವಪುರ, ವೆಂಕಪ್ಪ ಪಿಲಿಕೂರು, ರಿಝೋನ್ ಪಿಲಿಕೂರು, ಕೆ.ಪಿ.ಇಬ್ರಾಹಿಂ, ಆರೀಫ್ ಪಿಲಿಕೂರು, ಬಶೀರ್ ಪಿಲಿಕೂರು, ಅಶ್ರಫ್, ಹರಿನಾಥ್, ಸಿರಾಜ್, ನವೀನ್ ಆಳ್ವ, ಶರೀಫ್, ಇಲಿಯಾಸ್, ಇಸ್ಮಾಯಿಲ್ ಪಿಲಿಕೂರು, ಉಪಸ್ಥಿತರಿದ್ದರು. ಎನ್.ಐ.ಇಬ್ರಾಹಿಂ ಸ್ವಾಗತಿಸಿದರು.
ಕಿನ್ಯ : ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಕುಡಿಯುವ ನೀರಿಗೆ ಪ್ರಮುಖ ಆದ್ಯತೆಯನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಮೀನಾದಿಯಲ್ಲಿ ಬಾವಿ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಮೋನಪ್ಪ ಭಂಡಾರಿ ಅಭಿಪ್ರಾಯಪಟ್ಟರು. ಅವರು ಕಿನ್ಯ ಗ್ರಾಮದ ಮೀನಾದಿಯಲ್ಲಿ ತನ್ನ ವಿಧಾನ ಪರಿಷತ್ ಅವಧಿಯಲ್ಲಿ ಮಂಜೂರಾದ 3 ಲಕ್ಷರೂ. ಅನುದಾನದಲ್ಲಿ ನಿರ್ಮಾಣಗೊಂಡ ತೆರೆದ ಬಾವಿ ಅಭಿವೃದ್ಧಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಮೋಹನ್ ದಾಸ್ ಶೆಟ್ಟಿ ಕಿನ್ಯ, ಬಿಜೆಪಿ ಯುವ ಮೋರ್ಚಾ ಕ್ಷೇತ್ರ ಕಾರ್ಯದರ್ಶಿ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಗ್ರಾಮ ಪಂಚಾಯತ್ ಸದಸ್ಯ ಶೇಖರ್ ಮಾರ್ಲ, ಸತೀಶ್ ಶೆಟ್ಟಿ ಕಿನ್ಯ, ಸದಾಶಿವ ಆಚಾರ್ಯ, ಗಿರೀಶ್, ಶೀನ ಉಪಸ್ಥಿತರಿದ್ದರು. ಮೋಹನ್ ದಾಸ್ ಶೆಟ್ಟಿ ನೆತ್ತಿಲ ಸ್ವಾಗತಿಸಿದರು.
ಸೋಮೇಶ್ವರ: ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ದಿನಾಚರಣೆಯನ್ನು ಸೋಮೇಶ್ವರದ ಸಾರಸ್ವತ ಕಾಲನಿಯ ದ್ವಾರಕಾ ನಗರದಲ್ಲಿ ಆಚರಿಸಲಾಯಿತು. ಬಿಜೆಪಿ ಹಿರಿಯ ಕಾರ್ಯಕರ್ತೆ ವೇದಮ್ಮರವರನ್ನು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಗಾಗಿ ಸನ್ಮಾನಿಸಲಾಯಿತು. ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ದೇವಕಿ ರಾಘವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತೆ ಧನಲಕ್ಷ್ಮೀ, ಜಿಲ್ಲಾ ಸಮಿತಿ ಸದಸ್ಯ ನಮಿತಾ ಶ್ಯಾಂ, ಪ್ರಧಾನ ಕಾರ್ಯದರ್ಶಿ ಧನ್ಯವತಿ, ಶಕ್ತಿ ಕೇಂದ್ರದ ಅಧ್ಯಕ್ಷ ದೇವದಾಸ್ ಕೊಲ್ಯ, ಗೀತಾ ಜಿ. ಪ್ರಭು, ರಮಣಿ ಗಟ್ಟಿ, ಶೈಲೇಶ್ ಉಪಸ್ಥಿತರಿದ್ದರು. ಸೋಮೇಶ್ವರ ಪಂಚಾಯತ್ ಅಧ್ಯಕ್ಷೆ ರಮಣಿ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಕೆಂಪುಮಣ್ಣು ವಂದಿಸಿದರು.