UN networks
ಉಳ್ಳಾಲ: ಕರ್ನಾಟಕದಲ್ಲಿ ಕೆನ್ ಸ್ಟಾರ್ ಕಂಪನಿಯ 44 ಶಾಖೆಗಳಿದ್ದು ಮಂಗಳೂರಿನಲ್ಲಿ ಅತ್ಯಧಿಕ ಉತ್ಪನ್ನ ಮಾರಾಟವಾಗುವ ಮೂಲಕ ನಾಯಕನ ಸ್ಥಾನದಲ್ಲಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಏರ್ ಕೂಲರ್ ಮಹಾಕೂಲ್ 120 ಲೀಟರ್‌ನ ಡೆಸರ್ಟ್ ಕೂಲರ್ ಆಗಿದ್ದು ಇಷ್ಟೊಂದು ಸಾಮರ್ಥ್ಯದ ಏರ್ ಕೂಲರ್ ಬಿಡುಗಡೆಗೊಳಿಸಿದ ಪ್ರಥಮ ಕಂಪನಿಯಾಗಿದೆ. ರೆಸ್ಟೋರೆಂಟ್, ವ್ಯಾಪಾರಿ ಮಳಿಗೆ, ಬ್ಯಾಂಕ್, ಕಚೇರಿ, ದೊಡ್ಡ ಸಭಾಂಗಣದಲ್ಲಿ ಬಳಸಬಹುದಾಗಿದೆ ಎಂದು
ಕೆನ್ ಸ್ಟಾರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಜೈನ್ ತಿಳಿಸಿದರು.




















ತೊಕ್ಕೊಟ್ಟಿನ ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಂನಲ್ಲಿ ಕೆನ್ ಸ್ಟಾರ್ ಕಂಪನಿಯ ಹೊಸ ಉತ್ಪನ್ನ ಏರ್ ಕೂಲರ್ ಮಹಾಕೂಲ್ ಬಿಡುಗಡೆಗೊಳಿಸಿ ಮಾತನಾಡಿದರು.
ವಿನ್ಯಾಸ ವಿಭಾಗ ಮುಖ್ಯಸ್ಥ ಶ್ರೀಕಾಂತ್ ಕುಲ್ಲೆ ಮಾತನಾಡಿ, ಮಹಾಕೂಲ್ 120 ಬಿಡುಗಡೆಗೊಳಿಸಲಾಗಿದ್ದು ಮಂಗಳೂರಿನ ಜನತೆಗೆ ಇದರ ಅನುಭವ ಸವಿಯುವ ಭಾಗ್ಯ ಸಿಕ್ಕಿದೆ. ಅಮ್ಮ ಎಲೆಕ್ಟ್ರಾನಿಕ್ಸ್ ಮಾರಾಟ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದ್ದು ಕೆನ್ ಸ್ಟಾರ್ ಜೊತೆ ಹೀಗೇ ಮುಂದುವರಿಯುವಂತಾಗಲಿ ಎಂದು ತಿಳಿದರು.
ಕೆನ್ ಸ್ಟಾರ್ ಪ್ರಾದೇಶಿಕ ವ್ಯವಸ್ಥಾಪಕ ತಿರುಮಲೈ ದೇಸಾಯಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಾಮಾನ್ಯ ಗ್ರಾಹಕನ ಅಗತ್ಯತೆಗಳಿಗೆ ಅನುಸಾರ ಸ್ಪಂದಿಸಿದರೆ ಮಾತ್ರ ಸಂಸ್ಥೆ ಉಳಿಯಲು ಸಾಧ್ಯವಿದೆ. ಆ ಕೆಲಸ ಅಮ್ಮ ಎಲೆಕ್ಟ್ರಾನಿಕ್ಸ್ ನಲ್ಲಿ ನಡೆಯುತ್ತಿದ್ದು, ಗ್ರಾಹಕರ ಉತ್ತಮ ಸೇವೆ ನೀಡುವ ಮೂಲಕ ಪ್ರೀತಿಗೆ ಪಾತ್ರರಾಗಿದ್ದಾರೆ. ಇಲ್ಲಿನ ಸಿಬಂದಿ ಪ್ರಾಮಾಣಿಕ ಕಾರ್ಯವೈಖರಿಯೂ ಸಂಸ್ಥೆಯನ್ನು ಉನ್ನತಿಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ ಎಂದರು.
ಕೆನ್ ಸ್ಟಾರ್ ಶಾಖಾ ವ್ಯವಸ್ಥಾಪಕ ದೇವರಾಜ್, ಗ್ರಾಹಕ ಸೇವಾ ವಿಭಾಗ ವ್ಯವಸ್ಥಾಪಕ ಬಸವರಾಜ್ ಕುಮಾರ್, ಮಾರಾಟ ವಿಭಾಗದ ಮಹೇಶ್ ಕುಮಾರ್, ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಷೋರೂಮಿನ ವ್ಯವಸ್ಥಾಪಕಿ ಅಮಿತಾ ಮೊದಲಾದವರು ಉಪಸ್ಥಿತರಿದ್ದರು.
ಪೂರ್ಣಿಮಾ ಮೆಂಡನ್ ಸ್ವಾಗತಿಸಿದರು. ಮಾರಾಟ ವಿಭಾಗ ದತ್ತೇಶ್ ಕೊಲ್ಯ ವಂದಿಸಿದರು. ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.