UN networks
ಉಳ್ಳಾಲ: ಅಧಿಕಾರಿಗಳು ಚುನಾವಣಾ ಆಯೋಗದ ವಿಚಾರದಲ್ಲಿ ಪ್ರಚೋದನಕಾರಿ ವಿಚಾರಗಳನ್ನು ಮಾತನಾಡದೇ, ಆಯೋಗದ ಆದೇಶಕ್ಕೆ ಬದ್ಧರಾಗಿರಬೇಕು ಎಂದು 204 ಮಂಗಳೂರು ವಿಧಾನಸಭಾ ಕ್ಷೇತ್ರದ
ಚುನಾವಣಾ ಅಧಿಕಾರಿ ರಾಜು ಕೆ.ಹೇಳಿದರು
ಅವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾದ 204 ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಎಲ್ ಒ ಬಿಎಲ್ ಎ ಗಳಿಗೆ ಚುನಾವಣಾ ಪೂರ್ವ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.



ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್ಒ ಬಿಎಲ್ಎಗಳಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿಯನ್ನು ನೀಡಲಾಗಿದೆ. ಉಳ್ಳಾಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ, ಶಾಸಕರು ಕೂಡಾ ಹಾಜರಾಗಿ ತರಬೇತಿ ಪಡೆದುಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ಬಿಎಲ್ ಎಗಳು ಗೊಂದಲದ ಕುರಿತು ತಿಳಿಸಿರುವುದರ ಸ್ಪಷ್ಟತೆಯನ್ನು ನೀಡಲಾಗಿದೆ.ಎಸ್ ಎಸ್ ಟಿ, ಎನ್ ಎಸ್ ಟಿ ರೀತಿಯ ತರಬೇತಿಯನ್ನು ನೀಡಲಾಗಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ವೇತನ ಕುರಿತು ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ತಿಳಿಸಿದರು .
ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಪುಟ್ಟರಾಜು , ಉಳ್ಳಾಲ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.
ಈ ಸಂದರ್ಭ ಸೆಕ್ಟರ್ ಅಧಿಕಾರಿಗಳು ಇವಿಎಂ, ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
,
ಉಳ್ಳಾಲದ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ ವಂದಿಸಿದರು.