UN networks
ಉಳ್ಳಾಲ: ಯೂತ್ ಫ್ರೆಂಡ್ಸ್ ಕಿನ್ಯಾ ಇದರ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ ಹೊನಲು ಬೆಳಕಿನ ೬೫ ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆಬ್ರವರಿ ೧೨ ಭಾನುವಾರ ಬೆಳಿಗ್ಗೆ ಎರಡು ಗಂಟೆಗೆ ಕಿನ್ಯ ಬೆಳರಿಂಗೆಯಲ್ಲಿ ನಡೆಯಲಿದೆ ಎಂದು ಸಂಘಟಕ ಹಮೀದ್ ಕಿನ್ಯಾ ಹೇಳಿದರು.
ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು
ಪಂದ್ಯಾಟದ ಉದ್ಘಾಟನೆಯನ್ನು ಪ್ರೊ ಕಬಡ್ಡಿ ಆಟಗಾರ ಸಚಿನ್ ಸುವರ್ಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಕಿನ್ಯ ಗ್ರಾ.ಪಂ. ಸದಸ್ಯರಾದ ಪಯಾಝ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಅದೇ ದಿನ ರಾತ್ರಿ ಎಂಟು ಗಂಟೆಗೆ ಸ್ನೇಹ ಸಂಗಮ ಕಾರ್ಯಕ್ರಮವು ಖ್ಯಾತ ವೈದ್ಯ ಡಾ. ರಾಹುಲ್ ರಾಮಾನುಜಂ ನಾಟೆಕಲ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಸೀನಿಯರ್ ಇಂಜಿನಿಯರ್ ದೀಪಕ್ ನಾರಾಯಣ ಪೂಜಾರಿ, ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಆತ್ಮಶಕ್ತಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಹಕಾರಿ ರತ್ನ ಚಿತ್ತರಂಜನ್ ಬೋಳಾರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್,ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣಗಟ್ಟಿ ಕೋಟೆಕಾರ್, ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಸಹಿತ ಹಲವಾರು ಗಣ್ಯರು, ರಾಜಕೀಯ , ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಸ್ಮಾಯಿಲ್ ಕುರಿಯ, ಯೂತ್ ಫ್ರೆಂಡ್‌ನ ಮುಖ್ಯ ಸಂಚಾಲಕ ಹನೀಫ್ ಮೀಂಪ್ರಿ, ಸತ್ತಾರ್, ಅಮೀರ್,ಶಮೀರ್, ಬಾಷಿತ್ , ಸುಹೈಲ್, ಆಶಿಕ್, ಇಸ್ಮಾಯಿಲ್ ಉಪಸ್ಥಿತರಿದ್ದರು.