UN NEWS NETWORKS
ಉಳ್ಳಾಲ : ಶಿವರಾತ್ರಿಯಂದು ನಾವು ಎಚ್ಚರದಲ್ಲಿರ ಬೇಕು. ಮನುಷ್ಯ ಸದಾ ಜಾಗೃತನಾಗಿರುವುದು ಅಗತ್ಯ. ಮನುಷ್ಯರು ಶಿವ ಸ್ವರೂಪಿ ಹಾಗೂ ಜ್ಞಾನ ಸ್ವರೂಪಿಗಳಾದರೆ ಉತ್ತಮ. ಶಿವ ಚಿಂತನೆಗಳನ್ನು ಕವಿಗಳು ಕಾವ್ಯ ರೂಪದಲ್ಲಿ ಕಟ್ಟಿಕೊಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಸಾಹಿತಿ ಸರ್ಪಂಗಳ ಈಶ್ವರ ಭಟ್ ಹೇಳಿದರು.
ಶಿವರಾತ್ರಿಯಂದು ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಾಲಯದ ಸಭಾಂಗಣದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಚು. ಸಾ.ಪರಿಷತ್ತು ಇದರ ದ.ಕ.ಜಿಲ್ಲಾಧ್ಯಕ್ಷ ಕವಿ ಹರೀಶ್ ಸುಲಾಯ ಒಡ್ಡಂ ಬೆಟ್ಟು ಉಪವಾಸ ಎಂದರೆ ದೇವರ ಸಮೀಪ ಇರುವುದು.ಇದಕ್ಕೆ ಮಿತಾಹಾರ ಸೇವನೆ ಪೂರಕ. ನಮ್ಮನ್ನು ನಾವು ಅರಿಯಬೇಕು. ನಮ್ಮ ದೋಷಗಳನ್ನು ತಿದ್ದಲು ಭಜನೆ,ಸತ್ಸಂಗ ಅಗತ್ಯ. ಋಷಿ ಮುನಿಗಳ ಸಾಧನೆ ನಮಗೆ ಆದರ್ಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಶಿವನೆಂದರೆ ನಟರಾಜ,ಲಯ ಕಾರಕ. ರುದ್ರ ,ಸೌಂದರ್ಯಗಳೆರಡರ ಸಂಗಮ.ಹುಟ್ಟು ಸಾವುಗಳನ್ನು ತರುವವನು, ಜ್ಞಾನದ ಪ್ರತೀಕ ಎಂದರು.
ದೇವಾಲಯದ ಅರ್ಚಕ ರಾಮಕೃಷ್ಣ ಹೊಳ್ಳರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾಸರಗೋಡಿನ ಚು.ಸಾ.ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ಮಾತನಾಡಿದರು. ಹರಿಶ್ಚಂದ್ರ ಗಟ್ಟಿ ಉಪಸ್ಥಿತರಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವೆಂಕಟೇಶ್ ಗಟ್ಟಿ ವಾಚಿಸಿದ ಕವಿಗಳೆಲ್ಲರ ಕವನಗಳನ್ನು ವಿಮರ್ಶಿಸಿ ಪ್ರಶಂಸಿದರು. ಕವಿಗೋಷ್ಠಿಯಲ್ಲಿ ಅರ್ಚನಾ ಎಂ. ಬಂಗೇರ ಕುಂಪಲ,ಮನ್ಸೂರ್ ಮೂಲ್ಕಿ,ಎಸ್.ಕೆ. ಕುಂಪಲ,ರಾಮಾಂಜಿ ಉಡುಪಿ, ಸುಮಂಗಲಾ ದಿನೇಶ್ ಶೆಟ್ಟಿ, ರಶ್ಮೀ ಸನಿಲ್,ರೇಖಾ ಸುಧೇಶ್ ರಾವ್,ಹಿತೇಶ್ ಕುಮಾರ್, ಎ,ಆಕೃತಿ ಐ.ಎಸ್. ಭಟ್, ಕಾಂಚನಾ ಕೋಟೆಕಾರು ಸ್ವರಚಿತ ಕವನ ವಾಚಿಸಿದರು. ಎಸ್.ಕೆ. ಕುಂಪಲ ವಂದಿಸಿದರು.ಅರ್ಚನಾ ಎಂ. ಬಂಗೇರ ಕುಂಪಲ ನಿರೂಪಿಸಿದರು.ಈ ಕವಿಗೋಷ್ಠಿಯನ್ನು ದ.ಕ.ಜಿಲ್ಲಾ ಚು. ಸಾ.ಪರಿಷತ್ತು ಹಾಗೂ ಇದರ ಉಳ್ಳಾಲ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು.
ವಾಣಿ ಲೋಕಯ್ಯ ಪ್ರಾರ್ಥಿಸಿ ಸ್ವಾಗತಿಸಿದರು. ವಲಯದ ಚು. ಸಾ.ಪರಿಷತ್ತಿನ ಅಧ್ಯಕ್ಷ ಎಡ್ವರ್ಡ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು.